Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಸ್ಕರ್ ಪ್ರಸಸ್ತಿ ತೆಗೆದುಕೊಳ್ಳುವ ಗಮ್ಯಾ - ಕಾಶೀನಾಥ್
Posted date: 03 Tue, Dec 2013 – 08:19:18 AM

ಕಥೆ, ಚಿತ್ರಕಥೆ ಚೆನ್ನಾಗಿ ರೂಪಿಸದಿದ್ದರೆ ಯಾವುದೆ ಸ್ಟಾರ್ ಕಲಾವಿದ ನಟಿಸಿದರೂ ಚಿತ್ರ ಓಡುವುದಿಲ್ಲವೆಂಬ ಅಭಿಪ್ರಾಯ  ವ್ಯಕ್ತಿಪಡಿಸಿದವರು ಗತಕಾಲದ ನಟ,ನಿರ್ದೇಶಕ, ನಿರ್ಮಾಪಕ ಕಾಶೀನಾಥ್. ಅವರು ಹೀಗೆ ಮಾತನಾಡಿದ್ದು ಕರ್ನಾಟಕ ಚಲನಚಿತ್ರ ಅಕಾಡಮಿಯ ೪೬ನೇ ಬೆಳ್ಳಿಹೆಜ್ಜೆಯ ಸಂದರ್ಭದಲ್ಲಿ. ಕುಂದಾಪುರದ ಕಾಶೀನಾಥ್‌ಗೆ ವಿಜ್ಘಾನಿಯಾಗಬೇಕಂಬ ಆಸೆಯಿತ್ತು. ಆದರೆ ಅವರೊಳಗಿನ ತುಡಿತ ಆಸಕ್ತಿ ಚಲನಚಿತ್ರ ರಂಗಕ್ಕೆ  ಕರೆತಂದು ೩ ದಶಕಗಳ ಕಾಲ ಆಳುವಂತಾಗಿದೆ ಎಂದರು. ಮಾತು ಮುಂದುವರೆಸಿದ  ಅವರು ಹಿತ ಮಿತಿ ಚೌಕಟ್ಟಿನಲ್ಲಿ ಸಿನಿಮಾ ಮಾಡುತ್ತ ಬಂದವನು ನಾನು. ಅದನ್ನು ಈಗಲೂ ಪಾಲಿಸುತ್ತಿದ್ದೇನೆ. ಕಥೆಯಲ್ಲಿ ನಂಬಿಕೆಯಟ್ಟಿದರಿಂದಲೇ ಜನ ಈಗಲು ನನ್ನ ಚಿತ್ರಗಳ ಬಗ್ಗೆ ಮಾತನಾಡುತ್ತಾರೆ. ಸಾಂಪತ್ರ ಮಚ್ಚು ಲಾಂಗ್ ಚಿತ್ರಗಳು ಹೆಚ್ಚಾಗಿ ಬರುತ್ತಿವೆ. ಅಂತಹ ಸಿನಿಮಾ ಮಾಡಬೇಕಂಬ  ಪಸೆ ಇದೆ. ಆದರೆ ಅದು ನನಗೆ ಒಪ್ಪುವುದಿಲ್ಲ. ಶಿಷ್ಯ ಉಪೇಂದ್ರ ಓಂ ಮಾಡಿ ಸಾದಿಸಿದರು.  ಅನುಭವ, ಆನಂತರಅವಾಂತರ ದಲ್ಲಿ ಎಕ್ಸ್ ಪೋಸ್ ಇದೆ ಎನ್ನುತ್ತಾರೆ. ಅದು ಸುಳ್ಳು, ಈಗಿನ ಯು ಪ್ರಮಾಣಪತ್ರ ಪಡೆದಿರುವ ಚಿತ್ರಗಳಿಗಿಂತ ನನ್ನ ಚಿತ್ರಗಳು ಕೆಟ್ಟದಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾ ನಿರ್ಮಾಪಕರು  ಸಿಕ್ಕರೆ ಉಲ್ಕಾಪಾತ, ಸುನಾಮಿ, ಭಯೋತ್ಪಾದನೆ ಕುರಿತ ಚಿತ್ರಗಳನ್ನು ಮಾಡುವ ಆಸಕ್ತಿ ಇದೆ. ಈಗಿನ ಸಿನಿಮಾ ಬಗ್ಗೆ ನಾನೇನು ಹೇಳುವುದಿಲ್ಲ.
      ಅನುಭವ.ಅಪರಿಚಿತವನ್ನು ಹಿಂದಿಯಲ್ಲಿ ಮಾಡಿ ಸಾಕಷ್ಟು ಹಣ ಕಳೆದುಕೊಂಡೆ. ಬಾಂಬೆಯವರು ತಾವು ಹಣ ಹಾಕದೆ ಬೇರೆಯವರಿಂದ ಹಾಕಿಸುವ ಜಾಯಿಮಾನದವರು. ಅನುಭವ ಬಿಡುಗಡೆ ಮುನ್ನವೆ ಮದೆವೆಯಾಗಿತ್ತು. ಅದರ ನಂತರ ನಾನು ಮಾದುವೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರೆ ಯಾರು ಹೆಣ್ಣು ಕೊಡುತ್ತಿರಲಿಲ್ಲವೇನೋ ಎಂದು ನಕ್ಕರು. ಅಶ್ಲೀಲತೆಯೇ ಬೇರೆ, ಕಾಮವೇ ಬೇರೆ ಅಂತ ಎರಡಕ್ಕೂ ಸಾಮರಸ್ಯದ ವಿವರ ಕೊಟ್ಟರು ಕಾಶೀನಾಥ್. ನನ್ನ ಸಿನಿಪಯಣದಲ್ಲಿ ಎಲ್ಲವನ್ನು ಸುಖವಾಗಿ ಅನುಭವಿಸಿದ್ದೇನೆ. ಮುಂದೆನಿದ್ದರೂ ಉತ್ತಮ ಚಿತ್ರಗಳನ್ನು ನಿರ್ಮಿಸಿ ಆಸ್ಕರ್ ಪ್ರಶಸ್ತಿ ಗೆಲ್ಲುವ ಯೋಜನೆ ಇದೆ. ಕೆಲವೊಮ್ಮೆ ಸಣ್ಣ ತಪ್ಪುಗಳಿಂದ ಸಮಸ್ಯೆ  ಎದುರಿಸಬೇಕಾಗುತ್ತದೆ. ಅದು ನನ್ನ ಜೀವನದಲ್ಲಿ ನಡೆದುಹೋಗಿದೆ. ಸಿನಿಮಾಕ್ಕೆ ಅಂದ ಚೆಂದ ಬೇಕು ಅಂತ ಹೇಳುವುದು ಸರಿಯಲ್ಲ. ವಿಲಕ್ಷಣ ಚಿತ್ರಗಳಾದ ಅಪರೂಪದ ಅತಿಥಿಗಳು,  ಅನುಭವದಲ್ಲಿ ಯಾರು ರೂಪವಂತರಾಗಿರಲಿಲ್ಲ. ಆಧರೂ ಸಿನಿಮಾ ಹಿಟ್ ಆಯಿತು. ಪ್ರಸಕ್ತ ಯುವಕರು ಸಿನಿಮಾಗೆ ಬರಲು ಹಾತೊರೆಯುತ್ತಿದ್ದಾರೆ. ಆದರೆ ಅವರಿಗೆ ಸೂಕ್ತವಾದ ಮಾರ್ಗದರ್ಶನ  ಸಿಗುತ್ತಿಲ್ಲ. ಅದಕ್ಕೆ ಅಂತಲೆ ನಾನು ಕಾಶಿ ಸಿನಿ ಯಾತ್ರೆ ಎನ್ನುವ ವೆಬ್‌ಸೈಟನ್ನು ಆರಂಬಿಸಿ ಹೊಸ ಪ್ರತಿಭೆಗಳು, ನಿರ್ದೇಶಕರಿಗೆ ಅವಕಾಶ ಕೊಡಿಸುವ ಗುರಿ ನನ್ನದಾಗಿದೆ. ನನಗೆ ಅಹಂ ಬಂತು ಅಹಂ ಹೋಯಿತು ಎಂದು ನಕ್ಕ ಕಾಶೀನಾಥ್ ಪ್ರೇಕ್ಷಕರು ಕೇಳಿದ ಪ್ರಶ್ನಗಳಿಗೆ  ಸಾವದಾನದಿಂದ ಉತ್ತರಿಸಿದರು. ವಾರ್ತ ಇಲಾಖೆಯ ನಿರ್ದೇಶಕ ವಿಶುಕುಮಾರ್ ಮತ್ತು ಪುತ್ರ ಅಲೋಕ್‌ನಾಥ್ ಉಪಸ್ತಿತರಿದ್ದರು.
                                

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಸ್ಕರ್ ಪ್ರಸಸ್ತಿ ತೆಗೆದುಕೊಳ್ಳುವ ಗಮ್ಯಾ - ಕಾಶೀನಾಥ್ - Chitratara.com
Copyright 2009 chitratara.com Reproduction is forbidden unless authorized. All rights reserved.